Institution History
In the thriving city of Ranebennur, known for its achievements in the commercial sector, SHREE CHANNESH URBAN CO-OP CREDIT SOCIETY was established in 1998. Over the past 25 years, it has grown steadily amidst healthy competition. It is a matter of pride that this cooperative organization, started by several retired employees, traders, and like-minded individuals, has successfully served the community, thanks to their selfless service and sincere efforts.
ಬೀಜೋತ್ಪಾದನಾ ನಗರಿ, ವಾಣಿಜ್ಯ ಕ್ಷೇತ್ರದಲ್ಲಿ ತನ್ನದೆ ಆದ ಸಾಧನೆ ಮೆರೆದ ರಾಣಿಬೆನ್ನೂರಿನಲ್ಲಿ 1998 ರಲ್ಲಿ ಸಹಕಾರಿ ರಂಗದಲ್ಲಿ ಶ್ರೀ ಚನ್ನೇಶ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು 25 ವರ್ಷಗಳಲ್ಲಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ ನಗರದಲ್ಲಿ ಹೆಚ್ಚು ಸಹಕಾರಿ ಸಂಘಗಳು ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಅವುಗಳಿಗೆ ಸಮಾನವಾಗಿ ಆರೋಗ್ಯಕರ ಸ್ಪರ್ಧೆಯಿಂದ 25 ವರ್ಷಗಳನ್ನು ಪೂರೈಸಿ ಯಶಸ್ವಿಯಾಗಿದೆ.
ಸಂಸ್ಥೆಯ ಇತಿಹಾಸ :-
ಒಂದು ಸಂಸ್ಥೆಯು ಬೆಳೆಯಬೇಕಾದರೆ ಹಲವು ವ್ಯಕ್ತಿಗಳ ಶ್ರಮ, ತ್ಯಾಗ, ಪ್ರಯತ್ನ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ರಾಣೇಬೆನ್ನೂರಿನಲ್ಲಿ ಸಂಸ್ಥೆಯನ್ನು ಹುಟ್ಟುಹಾಕಲು ಅನೇಕ ಮಹನಿಯರ ನಿಸ್ವಾರ್ಥ ಸೇವೆ, ಪ್ರಾಮಾಣಿಕ ಪ್ರಯತ್ನದ ಫಲವಾಗಿ ಈ ಸಂಸ್ಥೆಯು ಪ್ರಾರಂಭವಾಗಿದೆ. ಅನೇಕ ನಿವೃತ್ತ ನೌಕರರು, ವ್ಯಾಪಾರಸ್ಥರು, ಅನೇಕ ಸಮಾನ ಮನಸ್ಕರೆಲ್ಲರೂ ಸೇರಿ ಒಂದು ಸಂಸ್ಥೆ ಪ್ರಾರಂಭಿಸಲು ಯೋಚಿಸಿದರು ಅದರಲ್ಲಿ ನಿವೃತ್ತ ಖಜಾನೆ ಅಧಿಕಾರಿಗಳಾದ ಲಿಂ|| ಗುಡ್ಡನಗೌಡ ಎಸ್. ಪಾಟೀಲ, ಖ್ಯಾತ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಕೆ. ಶಿವಲಿಂಗಪ್ಪ, ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ ಲಿಂ|| ಕೆ. ನಾಗಪ್ಪ, ನಿವೃತ್ತ ಇಂಜಿನಿಯರಾದ ಲಿಂ|| ಎಫ್. ಕೆ. ಬಿದರಿ, ನಿವೃತ್ತ ಅಧಿಕಾರಿ ಲಿಂ|| ಶಂಕ್ರಪ್ಪ ಎಮ್ ಮಾಗನೂರ, ನಗರದ ಗಣ್ಯ ವ್ಯಾಪಾರಸ್ಥರಾದ ಲಿಂ|| ವಿಶ್ವನಾಥ ಎಸ್ ಜಂಬಗಿ, ಶ್ರೀ ಚಂದ್ರಶೇಖರ ಸಿ. ಜಂಬಗಿ, ಶ್ರೀ ಬಸವರಾಜ ಎನ್ ಪಾಟೀಲ ಹಾಗೂ ದಿ|| ರವೀಂದ್ರ ಬಿ. ನಾಯ್ಕ ಇವರೆಲ್ಲರೂ ಸೇರಿ ಹಾಗೂ ಇವರ ಜೊತೆ ಸಲಹಾ ಸಮಿತಿ ಮಂಡಳಿಯಾಗಿ ಶ್ರೀ ಪೃಥ್ವಿರಾಜ ಡಿ. ಜೈನ್, ಶ್ರೀ ಆರ್. ಹೆಚ್. ಪಾಟೀಲ, ದಿ|| ಓಂಕಾರಪ್ಪ ಎಸ್. ಜಂಬಗಿ, ಶ್ರೀ ಗುರುಬಸಪ್ಪ ಎಸ್. ಕರಿಬೇವಿನ, ಶ್ರೀ ಸತೀಶ ಎನ್ ಹೊಳೆಬಾಗಿಲ, ದಿ|| ಗಣಪತಸಾ ಹೆಚ್. ಮೆಹರವಾಡೆ, ದಿ|| ಎಸ್. ಎಂ. ಗೌಡರ, ದಿ|| ಎನ್. ಹೆಚ್. ಕಂಬಳಿ, ಶ್ರೀ ಎನ್. ಎಸ್. ಪಾಟೀಲ ಇವರೆಲ್ಲರ ಸಲಹೆ ಸಹಕಾರ ಹಾಗೂ ಪರಿಶ್ರಮದಿಂದ ಸಂಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಿದರು.
Social Responsibility
Our cooperative society actively participates in social, educational, and religious activities. We support members with surgery and medical treatments through government schemes like Yeshasvini, provide funeral assistance, and offer accident insurance. Additionally, we facilitate vehicle insurance for members through partnerships with IFCO-TOKIO General Insurance Company. The society has also organized matrimonial events for the Veerashaiva Lingayat community, further showcasing our commitment to social responsibility.
ನಮ್ಮ ಸಹಕಾರಿಯು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಳಿಲುಸೇವೆ ಸಲ್ಲಿಸುತ್ತಿದೆ. ಸಹಕಾರಿಯ ಸದಸ್ಯರಿಗೆ ಶಸ್ತçಚಿಕಿತ್ಸೆ ಹಾಗೂ ಔಷದೋಪಚಾರಕ್ಕಾಗಿ ಸರ್ಕಾರದಿಂದ ರೂಪಗೊಂಡ ಯಶಸ್ವಿನಿ ಯೋಜನೆಯನ್ನು ನಮ್ಮ ಸದಸ್ಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಸಹಕಾರಿಯ ಸದಸ್ಯರು ನಿಧನರಾದರೆ ಅವರಿಗೆ ಶವ ಸಂಸ್ಕಾರ ನಿಧಿಯಿಂದ ಸಹಾಯ ಮಾಡಲಾಗುತ್ತಿದೆ. ಅಪಘಾತ ವಿಮೆ: ಸಾಲ ಪಡೆದ ಸದಸ್ಯರು ಐಚ್ಛಿಕವಾಗಿ ಅಪಘಾತ ವಿಮೆಯನ್ನು ಮಾಡಿಸಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಫ್ಕೋ-ಟೊಕಿಯೋ ಜನರಲ್ ಇನ್ಸೂರೆನ್ಸ ಕಂಪನಿ ಜೊತೆ ಒಡಂಬಡಿಕೆಯೊAದಿಗೆ ಸದಸ್ಯರ ವಾಹನಗಳಿಗೆ ವಿಮೆ ಮಾಡಲಾಗುತ್ತಿದೆ. ಕಲ್ಯಾಣ ಮಸ್ತು :- ವೀರಶೈವ ಲಿಂಗಾಯತ ಸಮಾಜದ ವದು-ವರರ ಸಮಾವೇಶವನ್ನು ಏರ್ಪಡಿಸುವುದರ ಮೂಲಕ ನಮ್ಮ ಸಹಕಾರಿಯು ತನ್ನ ಸಾಮಾಜಿಕ ಬಾಧ್ಯತೆಯನ್ನು ಮೆರೆದಿದೆ.
Find Us Easily
Address: CTS NO: 2093 1st Floor SRI MURARJI DESAI COMPLEX, NEHRU MARKET P.B ROAD, RANEBENNUR-581115
Telephone Number: 08373-269854
Started on: 3/May/2010
ವಿಳಾಸ: ಸಿ ಟಿ ಸ್ ನಂ 2093 ೧ನೇ ಮಹಡಿ ಶ್ರೀ ಮುರಾರ್ಜಿ ದೇಸಾಯಿ ಕಾಂಪ್ಲೆಕ್ಸ್, ನೆಹರು ಮಾರ್ಕೆಟ್ ಪಿ.ಬಿ. ರಸ್ತೆ, ರಾಣೇಬೆನ್ನೂರು -581115
ದೂರವಾಣಿ ಸಂಖ್ಯೆ: 08373-269854
ಪ್ರಾರಂಭ ದಿನಾಂಕ: 3/ಮೇ/2010
Social Responsibility
Our cooperative society actively participates in social, educational, and religious activities. We support members with surgery and medical treatments through government schemes like Yeshasvini, provide funeral assistance, and offer accident insurance. Additionally, we facilitate vehicle insurance for members through partnerships with IFCO-TOKIO General Insurance Company. The society has also organized matrimonial events for the Veerashaiva Lingayat community, further showcasing our commitment to social responsibility.